This is the title of the web page
This is the title of the web page

Live Stream

[ytplayer id=’1241′]

| Latest Version 8.0.1 |

international NewsNational News

ಅಧ್ಯಕ್ಷ ಸ್ಥಾನಕ್ಕೆ ಮತ್ತೊಮ್ಮೆ ಸ್ಪರ್ಧೆ: ಟ್ರಂಪ್


ವಾಷಿಂಗ್ಟನ್ :ಬರುವ ಅಮೆರಿಕ ಅಧ್ಯಕ್ಷಸ್ಥಾನಕ್ಕೆ ಸ್ಪರ್ಧೆ ಮಾಡುವುದಾಗಿ ಮಾಜಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದ್ದಾರೆ. ಕಳೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಪರಾಭವಗೊಂಡಿರುವ ಟ್ರಂಪ್ ಮುಂಬರುವ ಅಧ್ಯಕ್ಷೀಯ ಸ್ಥಾನಕ್ಕೆ ತಾವು ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.

ಅಮೆರಿಕವನ್ನು ಮತ್ತೊಮ್ಮೆ ಶ್ರೇಷ್ಠ ಹಾಗೂ ವೈಭವಯುತವಾಗಿಸಲು ಉಮೇದುವಾರಿಕೆ ಸಲ್ಲಿಸುತ್ತೇನೆ. ರಿಪಬ್ಲಿಕನ್ ಪಕ್ಷದಿಂದಾಲೇ ಸ್ಫರ್ಧಿಸುವುದಾಗಿ ತಿಳಿಸಿದ್ದಾರೆ. 2020ರ ಚುನಾವಣೆಯಲ್ಲಿ ಸೋಲು ಅನುಭವಿಸಿರುವ ಟ್ರಂಪ್, ಫಲಿತಾಂಶವನ್ನು ಒಪ್ಪಿಕೊಂಡಿರಲಿಲ್ಲ. ಅಮೆರಿಕದಲ್ಲಿ ಕಳೆದ ವಾರದ ನಡೆದ ಮಧ್ಯಂತರ ಚುನಾವಣೆ ಸಂದರ್ಭದಲ್ಲೇ ಟ್ರಂಪ್ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಸುಳಿವು ನಿಟ್ಟಿದ್ದರು. ಈಗಾಗಲೇ ಚುನಾವಣೆ ಪೂರಕವಾಗಿ ಪ್ರಚಾರವನ್ನೂ ಟ್ರಂಪ್ ಪ್ರಾರಂಭಿಸಿದ್ದು, ಮೇಕ್ ಅಮೆರಿಕ ಗ್ರೇಟ್ ಅಗೇನ್ ಎಂಬ ನಾಮಧೇಯದ ಘೋಷವಾಕ್ಯವನ್ನು ಮೊಳಗಿಸಿಲು ಹೆಜ್ಜೆ ಹಾಕಿದ್ದಾರೆ.


Kalyana Voice Desk