This is the title of the web page
This is the title of the web page

Live Stream

[ytplayer id=’1241′]

| Latest Version 8.0.1 |

National NewsState News

ಕಾರ್ಮಿಕರ ಹಿತ ಕಾಯದ ಕೇಂದ್ರ ಸರ್ಕಾರ ಸ್ಟಾರ್ ಟೈಲರ್ಸ್ ಸೇವಾ ಸಂಘ ಉದ್ಘಾಟನೆ


ರಾಯಚೂರು (ಮುದಗಲ್):
ಕಾರ್ಪೊರೇಟ್ ಸಂಸ್ಥೆಗಳಿಗೆ ಕೆಂಪು ಹಾಸಿಗೆ ಹಾಕುವ ಮೂಲಕ ದುಡಿಯುವ ಕಾರ್ಮಿಕ ವರ್ಗಕ್ಕೆ ಸರ್ಕಾರ ಅನ್ಯಾಯ ಮಾಡುತ್ತಿದೆ. ದುಡಿಯುವ ವರ್ಗ ಮತ್ತು ಸಂಘಟಿತ ಕಾರ್ಮಿಕರಿಗೆ ಕಲ್ಯಾಣ ನಿಧಿ ಸ್ಥಾಪನೆ ಮಾಡಿ ಅಗತ್ಯ ಸವಲತ್ತುಗಳನ್ನು ಕಲ್ಪಿಸಬೇಕಾಗಿದೆ ಎಂದು ಎಫ್‌ಐಟಿಯು ರಾಜ್ಯಾಧ್ಯಕ್ಷ ಸುಲೆಮಾನ್ ಕಲರ್ಪೆ ಹೇಳಿದರು. ಲಿಂಗಸುಗೂರು ತಾಲೂಕಿನ ಮುದಗಲ್ ಶಾದಿಮಹಲದಲ್ಲಿ ಸ್ಟಾರ್ ಟೈಲರ್ಸ್ ಸೇವಾ ಸಂಘವನ್ನು ಉದ್ಘಾಟನೆ ಕಾರ್ಯಕ್ರಮದಲ್ಲಿ ಬಾಗವಹಿಸಿ ಭಾನುವಾರ ಮಾತನಾಡಿದರು. ಕೇಂದ್ರ ಸರ್ಕಾರ ರಾಜಕೀಯ ಪಕ್ಷದ ಪ್ರಚಾರಕ್ಕೆ, ತನ್ನ ಪ್ರತಿಷ್ಠೆ ಹೆಚ್ಚಿಸಿಕೊಳ್ಳಲು ಕಾರ್ಮಿಕರ ನಿಧಿಯ ಹಣನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿದೆ. ಕಳೆದ 10 ವರ್ಷಗಳಲ್ಲಿ 8.9 ರಷ್ಟು ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಅಲ್ಲದೆ ಕಾರ್ಮಿಕರ ಸಂಘಟನೆಗಳನ್ನು ದಮನ ಮಾಡುವದಕ್ಕೆ ಸರ್ಕಾರ ಮುಂದಾಗಿದ್ದು ರಾಷ್ಟ್ರದಲ್ಲಿ ಉದ್ಯೋಗ ಸೃಷ್ಟಿ ಇಲ್ಲದಾಗಿದೆ. ಉದ್ಯೋಗ ಹರಸಿ ಯುದ್ದ ಪೀಡಿತ ಇಸ್ರೇಲ್ ದೇಶಕ್ಕೆ ಭಾರತೀಯ ಯುವಕರು ವಲೆಸೆ ಹೋಗುತ್ತಿರುವದು ದುರಂತವಾಗಿದೆ ಎಂದರು. ಅಸಂಘಟಿತವಾಗಿದ್ದ ಟೈಲರ್ ಸಂಘಟಕರಾಗಿ ಒಗ್ಗಟ್ಟಿನಿಂದ ಸಂಘಟನಾ ಶಕ್ತಿಯೊಂದಿಗೆ ಸರ್ಕಾರದ ಸೌಲಬ್ಯ ಪಡೆದುಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಸ್ಟಾರ್ ಟೈಲರ್ಸ್ ಸೇವಾ ಸಂಘ ಕಾರ್ಯಚಟುವಟಿಕೆಯ ಉದ್ಘಾಟನೆ ಮಾಡಿದ ಎಫ್‌ಐಟಿಯು ರಾಷ್ಟ್ರೀಯ ಉಪಾಧ್ಯಕ್ಷ ಜಿಡಿ ನದಾಫ್ ಮಾತನಾಡಿ ಕಾರ್ಮಿಕರ ಹಿತ ಕಾಯಬೇಕಾದ ಸರ್ಕಾರವೇ ಕಾರ್ಪುರೇಟರ್ ಪರವಾಗಿ ಕೆಲಸ ಮಾಡುತ್ತ ಶ್ರಮಿಕ ವರ್ಗವಾಗಿರುವ ಕಾರ್ಮಿಕರನ್ನು ಮರೆತಿರುವದು ಸರಿಯಲ್ಲ ಎಂದು ಹೇಳಿದರು. 1991 ರ ಹೊಸ ಆರ್ಥಿಕ ನೀತಿ ಕಾರ್ಮಿಕ ವರ್ಗಗಳ ಸಂಘಟನೆಗೆ ಕುತ್ತು ನೀಡಿದೆ. ಪೆಂಡಮಲ್ ಕಾಯ್ದೆ ಮೂಲಕ ಸಂಘಟಿತ ಮತ್ತು ಅಸಂಘಟಿತ ಶ್ರಮಿಕ ವರ್ಗಗಳನ್ನು ಅತ್ತಿಕ್ಕಲಾಗುತ್ತಿದೆ ಎಂದರು. ಕೇಂದ್ರ ಸರ್ಕಾರ ಕಾರ್ಮಿಕ ನಿಯಮಗಳನ್ನು ಹತ್ತಿಕ್ಕುತಿದ್ದಾರೆ. ಕಾರ್ಮಿಕರಿಗೆ ಶೇಕಡ 97 ರಷ್ಟು ಸಿಗಬೇಕಾದ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಕೆಲವು ಕಾಯ್ದೆ ತಿದ್ದುಪಡಿ ಮಾಡಿ ಬಂಡವಾಳ ಶಾಹಿಗಳಿಗೆ ವರ್ಗಾಯಿಸಿದ್ದಾರೆ. ಟೈಲರ್ ಕಾರ್ಮಿಕರಿಗೆ ನಿವೃತ್ತಿ ವೇತನ, ಮಕ್ಕಳ ಭವಿಷ್ಯಕ್ಕಾಗಿ ಸಾಲ ಸೌಲಭ್ಯ, ಸೇರಿದಂತೆ ವಿವಿಧ ಸೌಲಭ್ಯಗಳನ್ನು ಸರ್ಕಾರ ಒದಗಿಸಿಕೊಡಬೇಕೆಂದರು.
ಡಬ್ಲುಪಿಐ. ಜಿಲ್ಲಾಧ್ಯಕ್ಷ ಫರೀದ್ ಉಮ್ರಿ, ಎಫ್‌ಐಟಿಯು, ಉಪಾಧ್ಯಕ್ಷ ಅಬ್ದುಲ್ ರೆಹಮಾನ್, ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜ ನಾಯಕ್ ಮಾತನಾಡಿದರು. ಈ ಸಂದರ್ಭ ಸ್ಟಾರ್ ಟೈಲರ್ ಸಂಘ ಮುದಗಲ್ ಅಧ್ಯಕ್ಷ ಅಬ್ದುಲ್ ರೆಹಮಾನ್, ಬೀದಿಬದಿ ವ್ಯಾಪಾರಸ್ಥರ ಸಂಘ ಅಧ್ಯಕ್ಷ ಶಹಾನೂರ್, ಪ್ರಮುಖರಾದ ಆಭಿದ್ ಹುಸೇನ್, ನ್ಯಾಮತ್ ಖಾದ್ರಿ, ಬಾಷಾ ಜಂಬಾಳಿ, ಟೈರ‍್ಸ್ ಸಂಘದ ಪ್ರಧಾನ ಕಾರ್ಯದರ್ಶಿ ಅಬ್ಬಾಸಲಿ, ಪದಾದಿಕಾರಿಗಳಾದ ರಹಿಮಾನ್ ಸಾಬ್ ಜಂಬಾಳಿ, ಮಹ್ಮದ್ ನಬಿ ನಾಯಕ್ ಸೇರಿದಂತೆ ಇನ್ನಿತರರು ಇದ್ದರು.

ವರದಿ: ಮೌನೇಶ ಕುಮಾರ ಮುದಗಲ್

ಮೋ: +916363869337