This is the title of the web page
This is the title of the web page

Live Stream

[ytplayer id=’1241′]

| Latest Version 8.0.1 |

State News

ಎಸ್ ಎಸ್ ಎಲ್ ಸಿ.ಪರೀಕ್ಷಾ ಪ್ರಶ್ನೆ ಪತ್ರಿಕೆ ಹೌಟ್.??!


ರಾಯಚೂರು: ಇಂದು ನಡೆದ ಎಸ್ ಎಸ್ ಎಲ್ ಸಿ ಯ ಕನ್ನಡ ವಿಷಯದ ಪ್ರಶ್ನೆ ಪತ್ರಿಕೆ ಪರೀಕ್ಷಾ ಕೇಂದ್ರ ದಿಂದ ಸೋರಿಕೆ ಆಗಿದೆ ಎಂಬ ಸುದ್ದಿ ಕೇಳಿಬರುತ್ತಿದೆ.!
ಲಿಂಗಸುಗೂರು ತಾಲೂಕಿನ ಮುದಗಲ್ ಸರ್ಕಾರಿ ಪದವಿ ಪೂರ್ವ ಕಾಲೇಜ್ ಹಾಗೂ ಸೇಕ್ರೆಡ್ ಹಾರ್ಟ್ ಶಾಲೆಯಲ್ಲಿ ನ ಪರೀಕ್ಷಾ ಕೇಂದ್ರದಿಂದ ಕನ್ನಡ ವಿಷಯ ಪ್ರಶ್ನೆ ಪತ್ರಿಕೆಯನ್ನು ಹೊರಗಡೆ ಜರಾಕ್ಸ್ ಅಂಗಡಿಯಲ್ಲಿ ಜರಾಕ್ಸ್ ಮಾಡಿ ಒಳಗಡೆ ಪರೀಕ್ಷಾರ್ಥಿಗಳಿಗೆ ಉತ್ತರ ತಲುಪಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಇದರ ಬಗ್ಗೆ ಅಧಿಕಾರಿಗಳಲ್ಲಿ ಸ್ಪಷ್ಟತೆ ಇಲ್ಲ. ಇದಕ್ಕೆ ಪುಷ್ಟಿ ಎನ್ನುವಂತೆ ಪರೀಕ್ಷೆ ಆರಂಭವಾಗಿ ಕೇವಲ ಒಂದು ತಾಸಿನಲ್ಲಿಯೇ ಸ್ಥಳಿಯರ ಮೋಬೈಲ್ ದಲ್ಲಿ ಪ್ರಶ್ನೆ ಪತ್ರಿಕೆ ಹರಿದಾಡಿದೆ.!
ಪ್ರಶ್ನೆ ಪತ್ತಿಕೆಯ 7 ಪುಟಗಳನ್ನು ಫೋಟೊ ತೆಗೆಯಲಾಗಿದೆ.ಪ್ರಶ್ನೆ ಪತ್ರಿಕೆಯ ಮೇಲುಗಡೆ CCE RF/PF/NSR/NSPR(A)666/001 ಎಂದು ಇದೆ. ಈ ಪತ್ರಿಕೆ ಎಲ್ಲಿಂದ ಹೊರಗಡೆ ಬಂತು,? ಮತ್ತು ಇದನ್ನು ಮೊದಲು ಮೊಬೈಲ್ ದಲ್ಲಿ ಸೆರೆ ಹಿಡಿದು ಮತ್ತೊಬ್ಬರಿಗೆ ಶೇರ್ ಮಾಡಿದವರು ಯಾರು ? ಎಂಬುದು ಬಯಲಿಗೆ ಬರಬೇಕಾಗಿದೆ.
ಆತಂಕ: ಹಗಲು ರಾತ್ರಿ ನಿದ್ದೆಗೆಟ್ಟು ಅಭ್ಯಾಸ ಮಾಡಿದ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪ್ರಶ್ನೆ ಗಳಿಗೆ ನಿಯತ್ತಾಗಿ ಉತ್ತರಿಸಿ ಅಂಕ ಪಡೆಯುವ ವಿದ್ಯಾರ್ಥಿಗಳಲ್ಲಿ ಮತ್ತು ಪಾಲಕರಲ್ಲಿ ಈ ಘಟನೆ ಇಂದ ಆತಂಕ ಹೆಚ್ಚುವಂತೆ ಮಾಡಿದೆ.
ಮುದಗಲ್ ಪಟ್ಟಣದಲ್ಲಿ ಸೇಕ್ರೆಡ್ ಹಾರ್ಟ್ ಪ್ರೌಢ ಶಾಲೆ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜ್ ದಲ್ಲಿ ಎರಡುಕಡೆ ಪರೀಕ್ಷಾ ಕೇಂದ್ರಗಳು ತೆರೆಯಲಾಗಿದೆ.

  1. ಯಾರು.??: ಆದರೆ ಪರೀಕ್ಷೆ ಆರಂಭದ ದಿನವಾದ ಸೋಮವಾರ ಪರೀಕ್ಷಾ ಸಮಯಕ್ಕಿಂತ ಒಂದು ತಾಸು ಮುಂಚಿತವಾಗಿಯೇ ಪಟ್ಟಣದ ಕೆಲ ಖಾಸಗಿ ಪ್ರೌಢ ಶಾಲೆಗಳ ಶಿಕ್ಷಕರು ರಾಜರೋಷವಾಗಿ ಪರೀಕ್ಷಾ ಕೇಂದ್ರದಲ್ಲಿ ತಿರುಗಾಡುತಿದ್ದ ದೃಶ್ಯ ಅನುಮಾನ ಉದ್ಭವಕ್ಕೆ ಕಾರಣವಾಗಿದೆ.