This is the title of the web page
This is the title of the web page

Live Stream

[ytplayer id=’1241′]

| Latest Version 8.0.1 |

National NewsState NewsVideo News

ಹಿಮಾಲಯ ಪೀಠಾದೀಶರಿಂದ ಸಚ್ಛ ಚಂಡಿಯಾಗ ಶ್ರೀಸತ್ಯಮ್ಮ ದೇವಿ ದೇವಸ್ಥಾನ ಉದ್ಘಾಟನೆ


ರಾಯಚೂರು (ಮುದಗಲ್):
ಲೋಕ ಕಲ್ಯಾಣಕ್ಕೆ ಧಾರ್ಮಿಕ ಕಾರ್ಯಕ್ರಮಗಳು ಅವಶ್ಯಕವಾಗಿವೆ ಎಂದು ಹಿಮಾಲಯ ಪೀಠಾಧೀಶ್ವರ ಶ್ರೀ1008 ಅನಂತ ವಿಭೂಷಣ ಮಹಾಂಡಲೇಶ್ವರ ಶಿವಾಂಗಿನಂದ ಗಿರಿಯ ಮಹಾರಾಜರು ತಿಳಿಸಿದ್ದಾರೆ.

ದ್ವಾಪಾರ ಯುಗದಲ್ಲಿ ನಾಡಿನ ಪ್ರಜೆಗಳ ಒಳಿತಿಗಾಗಿ ಹಾಗೂ ದೇವರ ಸಂತೃಪ್ತಿಗಾಗಿ ಯಜ್ಞ,ಯಾಗಾದಿಗಳನ್ನು ಮಾಡುತ್ತಿದ್ದರು. ಆ ಉದ್ದೇಶದಿಂದ ನಾಡಲ್ಲಿ ಮಳೆಬೆಳೆ ಉತ್ತಮವಾಗಿ ನಾಡಿನ ಜನರಿಗೆ ಒಳ್ಳೆಯದಾಗುತಿತ್ತು. ಅದರಂತೆ ಕಲಿಯೂಗದಲ್ಲಿ ಕೂಡ ಪ್ರಕೃತಿಯ ಮಳೆ,ಬೆಳೆ ಚೆನ್ನಾಗಿ ಆಗಲಿ ಎಂಬ ಸದುದ್ದೇಶ ನಮ್ಮದಾಗಿದೆ. ಈ ನಿಟ್ಟಿನಲ್ಲಿ ಲಿಂಗಸುಗೂರು ತಾಲೂಕಿನ ಉಳಿಮೇಶ್ವರದಲ್ಲಿ ಶ್ರೀಸತ್ಯಮ್ಮ ದೇವಿ ಮೂರ್ತಿ ಪ್ರತಿಷ್ಠಾನ ಹಾಗೂ ದೇವಸ್ಥಾನ ಉದ್ಘಾಟನೆಯಲ್ಲಿ ಫೇ.11 ರಂದು ಸಚ್ಛ ಚಂಡಿಯಾಗ ಮಾಡಲಾಗುತ್ತಿದೆ.

ಈ ಕಾರ್ಯಕ್ರಮದಲ್ಲಿ ಇಪ್ಪತ್ತಕ್ಕೂ ಅಧಿಕ ಯಾಗ ಪಂಡೀತರು ಭಾಗವಹಿಸಲಿದ್ದಾರೆ ತಿಳಿಸಿದರು. ನಂತರ ಫೆ.12 ರಂದು ಶ್ರೀಸತ್ಯಮ್ಮ ದೇವಿಯ ವಿಗ್ರಹ ಧನ್ಯ ತೊಳೆಯುವದು,ಮತ್ತು ಯಾಗಾ ಆಹ್ವಾನ ಮಹಾ ಆರತಿ. ಫೆ.13 ರಂದು ಚಂಡಿಯಾಗದ ಸಂಪೂರ್ಣ ಅರ್ಪಣೆ ಮತ್ತು ದೇವಿಯ ವಿಗ್ರಹ ಪ್ರತಿಷ್ಠಪನೆ,ಧಾರ್ಮಿಕ ಸಭೆ ಜರುಗಲಿದೆ ಎಂದು ವಿವರಿಸಿದರು.

ಈ ಸಂದರ್ಭ ಪ್ರಮುಖರಾದ ಸಿದ್ದು ಬಂಡಿ, ಸತ್ಯಪ್ಪ ನೀರಾವರಿ,ಸತೀಶ ಬೋವಿ,ರಾಮಣ್ಣ ವ್ಯಾಸನಂದಿಹಾಳ,ಶರಣಪ್ಪ ವಡ್ಡರ್,ಹನುಮಂತ ನೀರಾವರಿ,ಸತ್ಯಪ್ಪ,ಸಣ್ಣ ಯಂಕಪ್ಪ, ದುರಗಪ್ಪ ಸೇರಿದಂತೆ ಇನ್ನಿತರರು ಇದ್ದರು.

ವರದಿ: ಮೌನೇಶಕುಮಾರ.