This is the title of the web page
This is the title of the web page

Live Stream

[ytplayer id=’1241′]

| Latest Version 8.0.1 |

National NewsState NewsVideo News

ರಾಯಚೂರಿನ FCI ಗೋದಾಮಿನಲ್ಲಿ ಅನ್ನಭಾಗ್ಯ ಅಕ್ಕಿಗೆ ಹಿಡಿದ ನುಸಿ ಹುಳು.! ಸಾರ್ವಜನಿಕರ ಆಕ್ರೋಶ.


ರಾಯಚೂರು ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆ ಸಲುವಾಗಿ ಕೂಡಿಟ್ಟ ಅಕ್ಕಿಯಲ್ಲಿ‌ ನುಸಿ‌ಹುಳು ಕಾಟ ಹೆಚ್ಚಾಗಿದೆ.‌ ಹಲವು ದಿನಗಳಿಂದ FCI ( ಭಾರತ ಆಹಾರ ನಿಗಮ ) ನಲ್ಲೇ ಇರಿಸಲಾದ ಅಕ್ಕಿಯಿಂದ ಸಮಸ್ಯೆ ಉಂಟಾಗಿದೆ. ಈ ಹಿನ್ನೆಲೆ FCI ಗೋದಾಮಿನಲ್ಲಿ ನುಸಿ ಕೀಟಗಳ ಸಂಖ್ಯೆ ಹೆಚ್ಚಳವಾಗಿ ಗೋದಾಮಿನಿಂದ ಆಚೆ ಬಂದ ಕೀಟಗಳಿಂದ ಸಾರ್ವಜನಿಕರಿಗೆ ಉಪಟಳ ನೀಡುತ್ತಿವೆ. ರಾಯಚೂರು ನಗರದ ಆಶಾಪುರ ರಸ್ತೆಯಲ್ಲಿ FCI ಗೋದಾಮು ಇದ್ದು, ರಾಯಚೂರು ನಗರದ ವಾರ್ಡ್ ನಂ. 2 ಲಂಬಾಣಿ ಕಾಲೋನಿ ಜನರಿಂದ ತೀವ್ರ ಆಕ್ರೋಶ ಎದುರಾಗಿದೆ. ಕುಂತಲ್ಲಿ, ನಿಂತಲ್ಲಿ, ಮಲಗಿದಲ್ಲಿ ಈ ಕೀಟಗಳದ್ದೇ ಕಿರಿಕಿರಿ. ತಿನ್ನುವ ಅನ್ನದಲ್ಲಿ, ಕುಡಿಯುವ ನೀರಿನಲ್ಲೂ ಪ್ರತ್ಯಕ್ಷವಾಗ್ತವೆ. ಕಣ್ಣಲ್ಲಿ, ಮೂಗಲ್ಲಿ, ಬಾಯಲ್ಲಿ ಕೀಟ ಹೊಕ್ಕು ನರಕಯಾತನೆ ಅನುಭವಿಸುವಂತಾಗಿದೆ. ಅದೆಷ್ಟೋ ಬಾರಿ ಚಿಕ್ಕಪುಟ್ಟ ಮಕ್ಕಳು ವಾಂತಿ ಭೇದಿಯಿದ ನರಳಿದ ಪ್ರಸಂಗವೂ‌‌ ಇದೆ. ಪ್ರತಿ ಬಾರಿ ಈ ಕೀಟ ಬಾಧೆಯಿಂದ ಏರಿಯಾ ಜನರು ಬಳಲುತ್ತಿದ್ದು, ಆದ್ರೆ ಈ ಬಾರಿ ಅತಿಹೆಚ್ಚು ಅಕ್ಕಿ ಸಂಗ್ರಹದಿಂದ ಲಕ್ಷಾಂತರ ಕೀಟಗಳು ಸೃಷ್ಟಿಯಾಗಿವೆ. ಸಂಜೆ ಹೊತ್ತಿಗೆ ಮನೆಗಳಿಗೆ ಲಗ್ಗೆ ಇಡುವ ಕೀಟಗಳಿಂದ ಸ್ಥಳೀಯರು ಭಯಭೀತರಾಗಿದ್ದಾರೆ.