This is the title of the web page
This is the title of the web page

Live Stream

[ytplayer id=’1241′]

| Latest Version 8.0.1 |

Crime NewsNational NewsState News

ಬಿಜೆಪಿ ವಕ್ತಾರನಂತೆ ಸೋಷಿಯಲ್ ಮಿಡಿಯಾದಲ್ಲಿ ಪ್ರಚಾರಕ್ಕೆ ಮುಂದಾದನೆ ಸರ್ಕಾರಿ ನೌಕರ.!!? ಎಚ್ಚಿದೆ ಶಿಕ್ಷಕನ ಅಮಾನತ್ತಿಗೆ ಆಗ್ರಹ * ಆಗಿದ್ದು ಶಿಕ್ಷಕ,ಮಾಡ್ತಿರೋದು ರಾಜಕೀಯ ಪಕ್ಷದ ಪ್ರಚಾರಕ!


ರಾಯಚೂರು: ಜಿಲ್ಲೆಯ ಜವಾಹರ್ ನವೋದಯ ವಿದ್ಯಾಲಯ ಕನ್ನಡ ವಿಷಯದ ಶಿಕ್ಷಕಕರಾಗಿ ಕರ್ತವ್ಯನಿರ್ವಹಿಸುತ್ತಿರುವ ಶಿಕ್ಷಕರೊಬ್ಬರು ಬಿಜೆಪಿ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿರುವ ಬಗ್ಗೆ ಜನಾಕ್ರೋಶಕ್ಕೆ ಗುರಿಯಾಗಿದ್ದಾನೆ.

ಸರ್ಕಾರಿ ನೌಕರನಾಗಿಯೂ ಒಂದು ರಾಜಕೀಯ ಪಕ್ಷದ ವಕ್ತಾರರಂತೆ ವರ್ತಿಸುತ್ತಿದ್ದು ಶಾಲೆಯಲ್ಲಿ ಮಕ್ಕಳಿಗೆ ಯಾವ ನೀತಿಪಾಠ ಹೇಳುತಿದ್ದಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.!

ರಾಯಚೂರು ಜಿಲ್ಲೆಯ ಮುದಗಲ್ ದಲ್ಲಿ ಇರುವ ಜವಾಹರ್ ನವೋದಯ ವಿದ್ಯಾಲಯದಲ್ಲಿ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಧರ ಗುಡಿ ಅವರು ತಮ್ಮ ಮೋಬೈಲ್ ನ ಸ್ಟೇಟಸ್ ಸಾಮಾಜಿಕ ಜಾಲತಾಣಗಳ ಭಾಗವಾದ ತಮ್ಮ ವಾಟ್ಸಾಫ್ ಸ್ಟೇಟಸ್ ನಲ್ಲಿ ಬಿಜೆಪಿ ಪಕ್ಷದ ವಕ್ತಾರರಂತೆ (ಮೋದಿಯವರನ್ನು ಹ್ಯಾಟ್ರಿಕ್‌ ಪ್ರಧಾನ ಮಂತ್ರಿಯಾಗಿ ಮಾಡಬೇಕು, ವಿರೋದ ಪಕ್ಷದ ಖರ್ಗೆಯವರನ್ನು ಟೀಕಿಸುವಂತೆ ಮತ್ತು ಬಿಜೆಪಿಯ ಮುಖವಾಣಿ Post Cord ಕ್ರೀಯೇಟ್ ಮಾಡಿದ ಸ್ಟೇಟಸ್ ತುಣುಕಗಳನ್ನು ಹಾಗೂ ರಾಜಕೀಯ ಕುಹಕದ ವಾಕ್ಯದ ಫೋಟೊ ಗಳನ್ನು ರಾಜರೋಷವಾಗಿ ತನ್ನ ಸ್ಟೇಟೆಸ್ ಗೆ ಹಾಕಿದ್ದಾರೆ.ಇದನ್ನು ಗಮನಿಸಿದ

ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಅಧ್ಯಕ್ಷರಾದ ಸುರೇಶ ಕಟ್ಟಿಮನಿ ಮತ್ತು ಮುದಗಲ್ ಭಾರತೀಯ ದಲಿತ ಪ್ಯಾಂಥರ್ ಅಧ್ಯಕ್ಷ ಕೃಷ್ಣಾ ಚಲುವಾದಿ ಗಮನಿಸಿ ಸ್ಕ್ರೀನ್ ಶಾಟ್ ತೆಗೆದುಕೊಂಡು ಈ ಬಗ್ಗೆ ಶಿಕ್ಷಕನನ್ನು ವಿಚಾರಿಸಿತಿದ್ದಂತೆಯೇ ಸ್ಟೇಟಸ್ Delete ಮಾಡಿದ್ದಾನೆ.
ಆದರೆ ಸರ್ಕಾರಿ ನೌಕರನಾಗಿಯೂ ನಿಯಮ ಮೀರಿ ರಾಜಕೀಯ ಪಕ್ಷದ ಪರವಾಗಿ ಕೆಲಸ ಮಾಡುತ್ತಿರುವ ಶಿಕ್ಷಕನನ್ನು ಸೇವೆ ಇಂದ ವಜಾ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.