This is the title of the web page
This is the title of the web page

Live Stream

[ytplayer id=’1241′]

| Latest Version 8.0.1 |

Crime NewsState NewsVideo News

ಅಂಕನಾಳ: ಮತದಾನ ಬಹಿಷ್ಕರಿಸಿದ ದಲಿತರು ಮೂಲ ಸೌಕರ್ಯ ಕಲ್ಪಿಸದಿರುವದಕ್ಕೆ ಆಕ್ರೋಶ

filter: 0; fileterIntensity: 0.0; filterMask: 0; module: a; hw-remosaic: 0; touch: (0.44462898, 0.44462898); modeInfo: ; sceneMode: Auto; cct_value: 0; AI_Scene: (-1, -1); aec_lux: 141.80153; hist255: 0.0; hist252~255: 0.0; hist0~15: 0.0;

  • ರಾಯಚೂರು (ಮುದಗಲ್): 
    ಲಿಂಗಸುಗೂರು ತಾಲೂಕಿನ ಕೊನೆಯ ಬಾಗದ ಹಳ್ಳಿಗಳಾಗಿರುವ ಅಂಕನಾಳ-ಉಪನಾಳದಲ್ಲಿ ವಾಸಿಸುವ ದಲಿತರು ಲೋಕಸಭಾ ಚುನಾವಣೆಯಲ್ಲಿ ಮತದಾನವನ್ನು ಬಹಿಷ್ಕರಿಸುವ ಮೂಲಕ ಮಂಗಳವಾರ ಪ್ರತಿಭಟನೆ ನಡೆಸಿದರು. ಹಲ್ಕಾವಟಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಅಂಕನಾಳ ಮತ್ತು ಉಪನಾಳ UKP ಯೋಜನೆ ಅಡಿ ಸ್ಥಳಾಂತರವಾಗಿರುವ ಅವಳಿ ಗ್ರಾಮದಲ್ಲಿನ ದಲಿತರ ಓಣಿಯಲ್ಲಿ ಕುಡಿವ ನೀರು, ಸಿಸಿ.ರಸ್ತೆ, ಬೀದಿ ದೀಪ, ಶೌಚಗೃಹ ಸೇರಿ ಮೂಲ ಸೌಕರ್ಯ ಕಲ್ಪಿಸಿಲ್ಲ.ಪ್ರತಿವರ್ಷ ಚುನಾವಣೆಯಲ್ಲಿ ವೋಟು ಹಾಕುವದಕ್ಕೆ ಅಷ್ಟೆ ನಾವು ಸೀಮಿತವಾಗಿದ್ದೆವೆ. ಆದರೆ ಚುನಾಯಿತ ಜನಪ್ರತಿನಿದಿಗಳಾಗಲಿ ಮತ್ತು ತಾಲೂಕ ಆಡಳಿತ ಸರಿಯಾದ ಸೌಕರ್ಯ ಕಲ್ಪಿಸಲು ಮುಂದಾಗುತ್ತಿಲ್ಲ. ದಲಿತರು ವಾಸಿಸುವ ಮನೆ ಸುತ್ತಲು ಜಾಲಿ ಗಿಡಗಳು ಬೆಳೆದು ವಿಷ ಜಂತುಗಳು ವಾಸವಾಗಿವೆ. ಬೀದಿ ದೀಪ ಇಲ್ಲದೆ ಕತ್ತಲಲ್ಲಿ ಜೀವ ಭಯದೊಂದಿಗೆ ಬದುಕಬೇಕಾಗಿದೆ.
  • ಮತ್ತು ನಡೆದಾಡಲು ಸಿಸಿ.ರಸ್ತೆಗಳು, ಕುಡಿಯಲು ನೀರು ಇಲ್ಲದೆ ತೊಂದರೆ ಅನುಭವಿಸುವಂತಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ಮತ್ತು ಚುನಾಯಿತ ಜನಪ್ರತಿನಿದಿಗಳಿಗೆ ತಿಳಿಸಿದರೂ ಯಾವುದೆ ಪ್ರಯೋಜನೆ ಆಗಿಲ್ಲ. ಆದ್ದರಿಂದ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸದೆ 150 ಕ್ಕೂ ಅಧಿಕ ಮತದಾರರು ಸಾಮೂಹಿಕವಾಗಿ ಮತದಾನವನ್ನು ಬಹಿಷ್ಕರಿಸುವ ಮೂಲಕ ಜಿಲ್ಲಾ ಆಡಳಿತಕ್ಕೆ ಒತ್ತಾಯ ಮಾಡಲಾಗುತ್ತಿದೆ ಎಂದು ಪ್ರತಿಭಟನೆ ನಿರತ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡೆಸಿದರು. ಈ ಸಂದರ್ಭ ಕೆಂಚಪ್ಪ ಹಾದಿಮನಿ, ಹನುಮಂತ, ಶಿವಪ್ಪ,ಲಕ್ಷö್ಮಣ, ಸಿದ್ದಪ್ಪ,ಬಸಮ್ಮ, ಲಕ್ಷö್ಮವ್ವ, ಹುಲಿಗೆಮ್ಮ, ಪವಾಡೆಮ್ಮ ಸೇರಿದಂತೆ ನೂರಾರು ಜನರು ಇದ್ದರು.ಲಿಂಗಸುಗೂರು ತಾಲೂಕಿನ ಕೊನೆಯ ಬಾಗದ ಹಳ್ಳಿಗಳಾಗಿರುವ ಅಂಕನಾಳ-ಉಪನಾಳದಲ್ಲಿ ವಾಸಿಸುವ ದಲಿತರು ಲೋಕಸಭಾ ಚುನಾವಣೆಯಲ್ಲಿ ಮತದಾನವನ್ನು ಬಹಿಷ್ಕರಿಸುವ ಮೂಲಕ ಮಂಗಳವಾರ ಪ್ರತಿಭಟನೆ ನಡೆಸಿದರು..

  • ವರದಿ:ಮೌನೇಶ ಕುಮಾರ ಮುದಗಲ್