This is the title of the web page
This is the title of the web page

Live Stream

[ytplayer id=’1241′]

| Latest Version 8.0.1 |

Crime NewsState News

ಚುನಾವಣೆ ಕರ್ತವ್ಯ ಲೋಪಮಾಡಿದ ಬಿಸಿಎಂ.ಅಧಿಕಾರಿಗೆ ಅಮಾನತ್ತು ಶಿಕ್ಷೆ.!


ರಾಯಚೂರು (ಮುದಗಲ್): ಚುನಾವಣೆ ಆಯೋಗ ಲೋಕಸಭಾ ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು ಸೂಕ್ತ ಅಧಿಕಾರಿಗಳನ್ನು ಕರ್ತವ್ಯಕ್ಕೆ ನೇಮಕಮಾಡಲಾಗಿದೆ. ಆದರೆ ಚುನಾವಣೆ ಕರ್ತವ್ಯ ವನ್ನು ಸರಿಯಾಗಿ ನಿಬಾಯಿಸದ ಅಧಿಕಾರಿಗಳನ್ನು ಕರ್ತವ್ಯ ದಿಂದ ಅಮಾನತ್ತು ಮಾಡುವ ಮೂಲಕ ಬಿಗ್ ಶಾಕ್ ನೀಡಿದೆ.!!
ತಮ್ಮ ಕರ್ತವ್ಯದ ಜಾಗದಲ್ಲಿ ಬೇರೊಬ್ಬರನ್ನು ಕರ್ತವ್ಯಕ್ಕೆ ಕಳುಹಿಸಿ,ರಾತ್ರಿ ತಾವು ಕರ್ತವ್ಯದಲ್ಲಿ ಇರುವದಾಗಿ ಜಿಪಿಎಸ್ ಭಾವ ಚಿತ್ರ ಕಾಣುವಂತೆ ಚುನಾವಣಾಧಿಕಾರಿಗಳಿಗೆ ತಪ್ಪಾಗಿ ಮಾಹಿತಿ ನೀಡಿದ್ದ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಲಿಂಗಸುಗೂರು ತಾಲೂಕ ಅಧಿಕಾರಿಯಾಗಿದ್ದ ರಮೇಶ ಜಿ.ರಾಠೋಡ್ ರವರನ್ನು ರಾಯಚೂರು ಜಿಲ್ಲಾಧಿಕಾರಿಯವರು 13-04-2024 ರಂದು ಸಸ್ಪಂಡೆ ಮಾಡಿ ಆದೇಶ ಹೊರಡಿಸಿದ್ದಾರೆ.
ಭಾರತ ಚುನಾವಣಾ ಆಯೋಗ ನೀಡಿದ ನಿರ್ದೇಶನಗಳಂತೆ, ನಿಯೋಜಿಸಿದ ಚುನಾವಣಾ ಕೆಲಸಗಳನ್ನು ನಿರ್ವಹಿಸುವಲ್ಲಿ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷತನ ವಹಿಸಿರುವುದರಿಂದ ಪ್ರಜಾ ಪ್ರತಿನಿಧಿ ಕಾಯ್ದೆ 1951ರ ಕಲಂ 134ರನ್ವಯ ಹಾಗೂ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957 ರ ನಿಯಮ 10(1)(ಡಿ) ರಡಿಯಲ್ಲಿ ನನಗೆ ಪ್ರದತ್ತವಾದ ಅಧಿಕಾರದ ಮೇರೆಗೆ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಲಿಂಗಸುಗೂರು ತಾಲೂಕ ಅಧಿಕಾರಿಯಾಗಿದ್ದ ರಮೇಶ ಜಿ.ರಾಠೋಡ್ ರವರನ್ನು ಸರ್ಕಾರಿ ಸೇವೆಯಿಂದ ಅಮಾನತ್ತುಗೊಳಿಸಿ ಆದೇಶಿಸಿದೆ.ಹಾಗೂ ಸದರಿ ನೌಕರರು ಅಮಾನತ್ತಿನ ಅವಧಿಯಲ್ಲಿ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳು, 1958ರ ನಿಯಮ-98 ರನ್ವಯ ನಿಗದಿಪಡಿಸಿರುವ ಜೀವನಾಧಾರ ಭತ್ಯೆ ಪಡೆಯಲು ಅರ್ಹರಿರುತ್ತಾರೆ. ಸದರಿ ಸಿಬ್ಬಂದಿಯು ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೇ ಕೇಂದ್ರ ಸ್ಥಾನ ಬಿಡತಕ್ಕದಲ್ಲ ಎಂದು ಜಿಲ್ಲಾಧಿಕಾರಿಗಳಾದ ಚಂದ್ರಶೇಖರ ನಾಯಕರವರು ತಮ್ನ ಆದೇಶದಲ್ಲಿ ತಿಳಿಸಿದ್ದಾರೆ.

ಕಲ್ಯಾಣ ಕರ್ನಾಟಕದ ಜನ-ಮನದ ಜೀವನಾಡಿಯಾಗಿರುವ *Kalyan voice* ಗೆ ಕೂಡಲೆ subscribed ಅಗಿ.
ಸುದ್ದಿ & ಜಾಹಿರಾತುಗಳಿಗೆ ಸಂಪರ್ಕಿಸಿ:
*ಮೌನೇಶ ಕುಮಾರ ಮೋ: +916363869337*