This is the title of the web page
This is the title of the web page

Live Stream

[ytplayer id=’1241′]

| Latest Version 8.0.1 |

Crime NewsEntertainment NewsState News

ಬಿಸಿಲೂರಿನಲ್ಲಿ ಮತ್ತೊಂದು ವಂಚನೆ ಪ್ರಕರಣ ಬಯಲು ಸರ್ಕಾರಿ ಕೆಲಸ ಕೊಡಿಸುವುದಾಗಿ ಗಂಡ-ಹೆಂಡತಿಯಿಂದ ಮೋಸ ಹೋದ 6 ಜನ


ಕಲ್ಯಾಣವಾಯ್ಸ್(ರಾಯಚೂರು): ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಪತಿ-ಪತ್ನಿ ಸೇರಿಕೊಂಡ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಘಟನೆ ರಾಯಚೂರು ಜಿಲ್ಲೆಯ ತಡವಾಗಿ ಬೆಳಕಿಗೆ ಬಂದಿದೆ.

ಜಿಲ್ಲೆಯ ಲಿಂಗಸೂಗೂರು ತಾಲೂಕಿನಲ್ಲಿ ಈ ಘಟನೆ ನಡೆದಿದೆ. ಪಟ್ಟಣದ 6 ಜನರು ವಂಚನೆಗೊಳಲಾಗಿದ್ದು, ಲಕ್ಷಾಂತರ ರೂಪಾಯಿಯನ್ನು ವಂಚನೆ ಮಾಡಿದ್ದಾರೆ. ಬೀದರ್ ಮೂಲದ ಸಂಜಯ್ ಶಂಭು ಹಾಗೂ ಈತನ ಪತ್ನಿ ಪ್ರೇರಣ ಸೇರಿಕೊಂಡು 2019ರಲ್ಲಿ ಮೋಸ ಮಾಡಿದ್ದು, ಇದೀಗ ಮೋಸ ಹೋಗಿರುವ ಕುರಿತು 2023 ಜ.9ರಂದು ಸರಳಾಕ್ಷ ಎನ್ನುವವರು ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ.

ಒಟ್ಟು 38 ಲಕ್ಷ 76 ಸಾವಿರ ರೂಪಾಯಿ ಹಣ ವಂಚನೆ ಮಾಡಿದ್ದಾರೆ. ಲಿಂಗಸೂಗೂರು ಪಟ್ಟಣದ ನವೀನ್ 11 ಲಕ್ಷ 18 ಸಾವಿರ ರೂಪಾಯಿ, ಶರಣಬಸವ, ಅಮರೇಶ ತಲಾ 7 ಲಕ್ಷ ರೂಪಾಯಿ, ಸಣ್ಣ ಹನುಮಂತ 5 ಲಕ್ಷ 18 ಸಾವಿರ, ಚಾಂದ್ ಹುಸೇನ್ 4 ಲಕ್ಷ 50 ಸಾವಿರ, ಮಹೆಬೂಬ್ ಸಾಬ್ 3 ಲಕ್ಷ ರೂಪಾಯಿ ಸೇರಿಕೊಂಡು 37 ಲಕ್ಷ 86 ಸಾವಿರ ರೂಪಾಯಿ ಹಣವನ್ನು ಸಂಜಯ್ ಖಾತೆಗೆ ಬ್ಯಾಂಕ್ ಹಾಕಿದ್ದಾರೆ. ಇದಾದ ಬಳಿಕ ಡಾಕಿಮೆಂಟ್ ಚಾರ್ಜ್ ಎಂದು 2019 ನವೆಂಬರ್ 7ರಂದು 50 ಸಾವಿರ ಹಾಗೂ 2019 ನವೆಂಬರ್ 13ರಂದು 22 ಸಾವಿರ ರೂಪಾಯಿ, 2019 ಡಿ.19ರಂದು 18 ಸಾವಿರ ರೂಪಾಯಿ ಸೇರಿ ಒಟ್ಟು 90 ಸಾವಿರ ರೂಪಾಯಿಯನ್ನು ಪೋನ್ ಪೇ ಮೂಲಕ ಸಂದಾಯ ಮಾಡುವ ಮೂಲಕ ಒಟ್ಟು 38 ಲಕ್ಷ 76 ಸಾವಿರ ರೂಪಾಯಿ ಕೆಲಸವನ್ನು ಕೊಡಿಸುತ್ತಾರೆ ಎಂದು ನೀಡಿದ್ದಾರೆ.

ಸಂಜಯ್ ಶಂಭು ಹಾಗೂ ಪತ್ನಿ ಪ್ರೇರಣ ಲಿಂಗಸೂಗೂರಿನಲ್ಲಿ ಇರುವ ಸರಳಾಕ್ಷ ಎನ್ನುವವರಿಗೆ ಸಂಬಂಧಿಕರೆಂದು ಪರಿಚಯವಾಗಿದ್ದಾರೆ. ಸಂಬಂಧಿಕರೆಂದು ಪರಿಚಯದ ನಂತರದಲ್ಲಿ ಸಂಜಯ್ ಶಂಭು ನಾನು ಲೋಕಾಯುಕ್ತ ಇಲಾಖೆಯಲ್ಲಿ ಈಗ ಸ್ವಯಂ ಆಗಿ ನಿವೃತ್ತಿ ಹೊಂದಿದ್ದಾನೆ. ನನ್ನಗೆ ರಾಜಕೀಯ ಗಣ್ಯರು ಒಡನಾಟವಿದ್ದು, ಅರ್ಹ ಹಾಗೂ ಸೂಕ್ತ ಅಭ್ಯರ್ಥಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. ಇದನ್ನು ನಂಬಿದ ಸರಳಾಕ್ಷ ಎನ್ನುವವರು ಪರಿಚಯಸ್ಥರಿಗೆ 6 ಜನರಿಗೆ ವಿಷಯ ತಿಳಿಸಿದ್ದಾರೆ. ಇದನ್ನು ನಂಬಿದ 6 ಜನ ಹಣವನ್ನು ನೀಡಿದ್ದಾರೆ. ಹಣ ನೀಡಿದ 15 ದಿನದೊಳಗೆ ಕೆಲಸ ಮಾಡಿಸುವುದಾಗಿ ಭರವಸೆ ನೀಡಿದ್ದರು.

ಆದರೆ ಹಲವು ದಿನಗಳ ಕಳೆದ ಬಳಿಕ ಕೆಲಸ ನೀಡದೆ ಇದ್ದಾಗ ಈಗ ಬರುತ್ತೆ, ಆಗ ಬರುತ್ತೆ ಎಂದು ದಿನಗಳ ಮುಂದುವರೆಸಿದ್ದರೆ. ಆದರೆ ನೀಡಿರುವ ಹಣವನ್ನು ಮರುಪಾವತಿ ಮಾಡದೆ, ಕೆಲಸ ನೀಡದೆ ಇರುವುದ್ದರಿಂದ ವಂಚನೆ ಮಾಡಿದ್ದಾರೆ ಎಂದು ಅರಿತು ನ್ಯಾಯ ದೊರಕಿಸುವಂತೆ ಸರಳಾಕ್ಷ ಎನ್ನುವವರು ಲಿಂಗಸೂಗೂರು ಪೊಲೀಸ್ ಠಾಣೆಗೆ ದೂರು ನೀಡಿರುವುದಾಗಿ ತಿಳಿಸಿದ್ದಾರೆ. ದೂರಿನ ಆಧಾರದ ಮೇಲೆ ಲಿಂಗಸೂಗೂರು ಠಾಣೆಲ್ಲಿ ಕಲಂ 406, 420 ಐಪಿಸಿ ಐಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ್ಡು, ತನಿಖೆ ಕೈಕೊಂಡಿದ್ದಾರೆ.